kannada kavithe -kavite yaaru? 1.3 Icon

kannada kavithe -kavite yaaru?

VidyaShankar Harapanahalli Books & Reference
4.7
15 Ratings
6K+
Downloads
1.3
version
Oct 10, 2015
release date
3.0 MB
file size
Free
Download

What's New

Version 1.3 of Kavithe yaaru koLtaare swamy??? Minor improvement in improved user experience and images.

About kannada kavithe -kavite yaaru? Android App

ಕನ್ನಡ ಕವಿತೆಗಳ ಸಂಕಲನ. ಕವಿತೆ ಯಾರು ಕೊಳ್ತಾರೆ ಸ್ವಾಮೀ??? Kavite yaaru koLtaare swamy? Free to download App. This App has rich collection of young and senior contemporary poets of Karnataka. As publisher are having view of 'who will buy and read poetry?'. Technology has come handy for aspiring young poets. After blogs, social networking site, Books in the Android app form is probably is new way of publishing and reach people.

The disappointing response from the publishers " "Who will buy poetry?" is the main driving force, for this experiment of creating android app .Though its not a contradictory competitor for printing media, its definitely stepping ahead to overcome the shortcomings and emerge as a better solution to the standstill, rigid printing media.our team has the desire to make Kannada literature world fascinated by a wide range of audiences by enabling publishing,reading,reaching & cherishing the poetic works across the globe.

For this innovative experiment its my privilege to have been accompanied by young writers, software professionals.I m thankful for all the one who have been directly and indirectly engaged in making this happen.the toddler steps that we embarked, if ensembles larger our mission is accomplished to propagate Kannada literature worldwide.

If our project has emerged as a zero budget app, its mainly due to the love and conviction our team has for the language and the literature. I can guarantee the one to setup high hopes and expectations from us in that regard.

ಆಶಯ

ಕನ್ನಡ ಕಾವ್ಯ ಭವ್ಯ ಪರಂಪರೆಯ ಬಗ್ಗೆ ಹೇಳುವುದೇ ಬೇಡ, ಅಷ್ಟು ವಿಶಾಲ ಮತ್ತು ಸಮೃದ್ಧವಾಗಿದೆ. ಹಳೆಗನ್ನಡ, ನಡುಗನ್ನಡ ಮತ್ತು ಹೊಸ ಕನ್ನಡದಲ್ಲಿ ಕಾವ್ಯ ತನ್ನ ನಿರಂತರತೆಯನ್ನು ಕಾಯ್ದು ಕೊಂಡಿದೆ. ಪಂಪ, ರನ್ನ, ಜನ್ನ ಹರಿಹರ, ರಾಘವಾಂಕ, ಕುಮಾರವ್ಯಾಸ, ವಚನಕಾರರು, ಪುರಂದರ-ಕನಕ ದಾಸರ ಭಕ್ತಿ ಸಾಹಿತ್ಯ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು, ಕೆಸ್ಸ್ಎನ್ನ್, ಹೆಚೆಸ್ವಿ, ಜಿಎಸ್ಸ್ ಶಿವರುದ್ರಪ್ಪ, ಕಂಬಾರರು, ಸಿದ್ದಲಿಂಗಯ್ಯ ಮುಂತಾದವರಿಂದ ಕನ್ನಡ ಕಾವ್ಯ ಸಮೃದ್ಧವಾಗಿದೆ.

ಯಾವುದೇ ಸಾಹಿತ್ಯ ಆಸಕ್ತರು ತಮ್ಮ ಮೊದಲ ಬರವಣಿಗೆ ಶುರು ಮಾಡುವುದು ಕವಿತೆಯಿಂದಲೇ. ಹದಿಹರೆಯದ ವಯಸ್ಸಿನಲ್ಲಿ ಕವಿತೆಯನ್ನು ಬರೆಯದ ಸಾಹಿತ್ಯಾಸಕ್ತರೆ ಇಲ್ಲವೆನ್ನಬೇಕು. ಉತ್ತಮ ಕವಿತೆಗಳ ಗುಚ್ಛವನ್ನು ಹಿಡಿದು ಪುಸ್ತಕ ಪ್ರಕಾಶಕರ ಮುಂದೆ ನಿಲ್ಲುವ ಕವಿಗೆ ಸಾಮಾನ್ಯವಾಗಿ ಕಿವಿಗೆ ಬೀಳುವ ನಿರುತ್ಸಾಹದ ಮಾತು 'ಕವಿತೆಗಳ ಪುಸ್ತಕಕ್ಕೆ ಮಾರುಕಟ್ಟೆ ಇಲ್ಲಾರೀ... ಕವಿತೆ ಯಾರ್ ಕೊಳ್ತಾರೆ ಸ್ವಾಮಿ?'.

ಇಂತಹ ನಿರುತ್ಸಾಹದ ಕಾರ್ಮೋಡಗಳನ್ನ ಹೊಡೆದೋಡಿಸಲು ಕನ್ನಡ ಯುವ ಕವಿಗಳಿಗೆ ಜೊತೆಯಾಗಿದ್ದು ಅಂತರ್ಜಾಲ ತಂತ್ರಜ್ಞಾನ. ಹಾಗಾಗಿ ಬ್ಲಾಗ್, ಫೇಸ್ಬುಕ್-ನಲ್ಲಿ ಹೊಸ ಕಾವ್ಯಧಾರೆ ಹರಿಯುತ್ತಿದೆ. ಜೊಳ್ಳು, ಪೊಳ್ಳು, ಗಟ್ಟಿ, ಮಹತ್ವಾಕಾಂಕ್ಷೆ ಕಡಿಮೆ ಎಂಬ ವಿಮರ್ಶೆಯ ಮಾತನ್ನೆಲ್ಲಾ ಬದಿಗಿಟ್ಟು ನೋಡಿದರೆ ಕನ್ನಡದ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ.

ಈ ಪ್ರಯೋಗಕ್ಕೆ, ಈ ಅಂಡ್ರಾಯಿಡ್ ಆ್ಯಪ್ ಸೃಷ್ಟಿಗೆ 'ಕವಿತೆ ಯಾರ್ ಕೊಳ್ತಾರೆ ಸ್ವಾಮಿ?' 'ಅಯ್ಯೋ ಫೇಸ್ಬುಕ್ ಕವಿಗಳು' ಎಂಬ ನಿರುತ್ಸಾಹದ ಮಾತುಗಳೇ ಸ್ಫೂರ್ತಿ. ಇದು ನಿಂತ ನೀರಾಗುತ್ತಿರುವ ಮುದ್ರಣ ಮಾಧ್ಯಮವನ್ನು ಮೀರಿ ನಿಲ್ಲುವ ಪ್ರಯತ್ನವೂ
ಹೌದು. ಅದರ ವಿರುದ್ಧವಲ್ಲವಾದರೂ, ಮುದ್ರಣ ಮಾಧ್ಯಮದ ಜೊತೆ ಜೊತೆಗೆ ಓದಿನ, ಪ್ರಕಟಣೆಯ, ಓದುಗರ ತಲುಪುವ, ಕನ್ನಡ ಕಾವ್ಯದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ಆಶಯ ನಮ್ಮ ತಂಡಕ್ಕಿದೆ.

ಈ ಪ್ರಯೋಗಕ್ಕೆ ಕನ್ನಡದ ಪ್ರಮುಖ ಯುವ ಕವಿಗಳು, ಕವಯತ್ರಿಯರು, ಕನ್ನಡ ನಾಡಿನ ಯುವ ಸಾಫ್ಟ್ವೇರ್ ತಂತ್ರಜ್ಞರು ಜೊತೆಯಾಗಿದ್ದು ನನ್ನ ಸೌಭಾಗ್ಯ ( ಅವರ ವಿವರಗಳು ನಮ್ಮ ತಂಡದ ಪುಟದಲ್ಲಿದೆ). ಈ ಪ್ರಯತ್ನಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಕನ್ನಡದ ಮಟ್ಟಿಗೆ ಇದು ಪುಟ್ಟ ಹೆಜ್ಜೆಯಾದರೂ, ಇನ್ನಷ್ಟು ಮತ್ತಷ್ಟು ಪ್ರಯತ್ನಗಳು ಈ ದಿಕ್ಕಿನಲ್ಲಿ ನಡೆದರೆ ಅಲ್ಲಿಗೆ ನಮ್ಮ ಶ್ರಮ ಸಾರ್ಥಕ.

ಅಂದ ಹಾಗೆ ಈ ಪ್ರಾಜೆಕ್ಟ್ ನಮ್ಮ ತಂಡದ ಶ್ರಮದಾನದಿಂದಾಗಿ ಸೊನ್ನೆ ರೂಪಾಯಿ ಬಜೆಟ್ನಲ್ಲಿ ಹೊರಬಂದಿದೆ. ಇದೂ ಸಾಧ್ಯವಾಗಿದ್ದು ನಮ್ಮ ತಂಡದ ಅದಮ್ಯ ಕನ್ನಡ ಮತ್ತು ಕನ್ನಡ ಕಾವ್ಯ ಪ್ರೀತಿಯಿಂದ. ಹಾಗಾಗಿ ನಾವು ಕನ್ನಡದ ಭವಿಷ್ಯದ ಬಗ್ಗೆ ಆಶಾಭಾವನೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಎಂಬ ಭರವಸೆ ಕೊಡಬಲ್ಲೆ.

ಈ ಪ್ರಾಜೆಕ್ಟ್'ಗೆ ಯಾವುದೇ ಪ್ರತಿಫಲ ಅಭಿಲಾಷೆಯಿಲ್ಲದೆ ದುಡಿದ ಎಲ್ಲರನ್ನೂ, ಕವಿಗಳನ್ನು ಗೌರವಿಸುವ ಹಂಬಲವಿದೆ, ಆಸಕ್ತರು, ಕನ್ನಡ ಅಭಿಮಾನಿಗಳು, ಧನ ಸಹಾಯ ಮಾಡಲು ಇಚ್ಛಿಸುವರು, ಸಂಘ ಸಂಸ್ಥೆಗಳು ದಯವಿಟ್ಟು ಇಮೇಲ್ ([email protected]) ಮುಖಾಂತರ ಸಂಪರ್ಕಿಸಿ. ನಿಮ್ಮ ಪ್ರೋತ್ಸಾಹ, ಸಹಾಯ ನಮ್ಮ ಮುಂದಿನ ಪ್ರಾಜೆಕ್ಟ್' ಗೂ ಸಹಾಯಕ.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ!

Other Information:

Package Name:
Requires Android:
Android 2.2+ (Froyo, API 8)
Other Sources:

Download

This version of kannada kavithe Android App comes with one universal variant which will work on all the Android devices.

Variant
4
(Oct 10, 2015)
Architecture
Unlimited
Minimum OS
Android 2.2+ (Froyo, API 8)
Screen DPI
nodpi (all screens)

All Versions

If you are looking to download other versions of kannada kavithe Android App, We have 1 version in our database. Please select one of them below to download.

Loading..